ಡಿಸೆಂಬರ್ ೩ - ಡಿಸೆಂಬರ್ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೭ನೇ (ಅಧಿಕ ವರ್ಷದಲ್ಲಿ ೩೩೮ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೬೭ - ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಕ್ರಿಶ್ಚಿಯಾನ್ ಬೆರ್ನಾರ್ಡ್ ನಾಯಕತ್ವದ ತಂಡ ವಿಶ್ವದ ಮೊದಲ ಹೃದಯ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಪೂರೈಸಿದರು. ೧೯೭೧ - ಪಾಕಿಸ್ತಾನವು ಭಾರತದ ವಾಯುಸೇನೆಯ ನಿಲ್ದಾಣಗಳ ಮೇಲೆ ಮಾಡಿದ ಆಕ್ರಮಣಕ್ಕೆ ಉತ್ತರವಾಗಿ ಭಾರತದ ಸೇನೆ ಪೂರ್ವ ಪಾಕಿಸ್ತಾನವನ್ನು ಪ್ರವೇಶಿಸಿ ೧೯೭೧ರ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾಯಿತು. ೧೯೮೪ - ಭೂಪಾಲದಲ್ಲಿ ಯುನಿಯನ್ ಕಾರ್ಬೈಡ್ ಸಂಸ್ಥೆಯ ಕಾರ್ಖಾನೆಯಿಂದ ಹೊರಹಮ್ಮಿದ ಮೀಥೈಲ್ ಐಸೊಸಯನೇಟ್ ಅನಿಲದಿಂದ ಸುಮಾರು ೩,೮೦೦ ಜನ ತಕ್ಷಣ ಮೃತಪಟ್ಟು ಸುಮಾರು ೧೫೦,೦೦೦ದಿಂದ ೬೦೦,೦೦೦ ಜನರು ಪ್ರಭಾವಿತರಾದರು. ೧೯೯೯ - ಮಂಗಳ ಗ್ರಹವನ್ನು ತಲುಪಿದ ಕೂಡಲೆ ಮಾರ್ಸ್ ಪೋಲಾರ್ ಲ್ಯಾಂಡರ್ ನಾಸಾದೊಂದಿಗೆ ಸಂಪರ್ಕ ಕಳೆದುಕೊಂಡಿತು. == ಜನನ == ೧೩೬೮ - ಫ್ರಾನ್ಸ್ನ ರಾಜ ಆರನೇ ಚಾರ್ಲ್ಸ್. ೧೮೦೭ - ಡೇವಿಡ್ ಆಲ್ಟರ್, ಅಮೇರಿಕಾದ ಖ್ಯಾತ ಭೌತವಿಜ್ಞಾನಿ ೧೮೮೩ - ನಂದಲಾಲ್ ಬಸು, ಪ್ರಖ್ಯಾತ ಬಂಗಾಳಿ ಕಲಾಕಾರ ೧೮೮೪ - ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ೧೮೮೯ - ಖುದಿರಾಮ್ ಬೋಸ್, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ೧೯೨೩ - ವಿ.ಜಿ.ಭಟ್ಟ, ಕನ್ನಡ ಸಾಹಿತಿ ೧೯೩೬ - ಲೀಲಾವತಿ ತೋರಣಗಟ್ಟಿ, ಕನ್ನಡ ಕಥೆಗಾರ್ತಿ ಮತ್ತು ಕಾದಂಬರಿಗಾರ್ತಿ == ಮರಣ == ೧೯೭೯ - ಧ್ಯಾನ್ ಚಂದ್, ಭಾರತದ ಹಾಕಿ ಪಟು. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ